Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ರಾಷ್ಟ್ರೀಯ ಶಿಕ್ಷಣ ನೀತಿಯ ರಾಷ್ಟ್ರೀಯ ಅನುಷ್ಠಾನ ವಿಭಾಗದ ಸದಸ್ಯರಾದ ಡಿ.ರಾಮಕೃಷ್ಣ ರಾವ್ ಶಕ್ತಿ ವಿದ್ಯಾ ಸಂಸ್ಥೆಗೆ ಭೇಟಿ

ಮಂಗಳೂರು ಆ. 26 : ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ರಾಷ್ಟ್ರೀಯ ಅನುಷ್ಠಾನ ವಿಭಾಗದ ಸದಸ್ಯರಾದ ವಿಶಾಖಪಟ್ಟಣದ ಡಿ.ರಾಮಕೃಷ್ಣ ರಾವ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಜೊತೆ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಚರ್ಚೆಯನ್ನು ನಡೆಸಿದರು.

ನಂತರ ಮಾತನಾಡಿದ ಅವರು ಪೂರ್ವ ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣ: ಕಲಿಕೆಯ ಬುನಾದಿ (ECCE) ಯ ಪಠ್ಯ ಪುಸ್ತಕದ ತಯಾರಿಯು ಅಂತಿಮ ಹಂತದಲ್ಲಿದೆ. 3ನೇ ವಯಸ್ಸಿನಿಂದ ಪೂರ್ವ ಬಾಲ್ಯಾವಸ್ಥೆ ಆರೈಕೆ ಮತ್ತು ಸುಭದ್ರ ತಳಹದಿಯಾದ (ECCE) ಸೇರಿದೆ ಎಂದು ಹೇಳಿದರು. ದೇಶದಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ಶಾಲೆಗಳಿವೆ. ಇಲ್ಲಿರುವ ಎಲ್ಲಾ ಅಧ್ಯಾಪಕರಿಗೆ ಎನ್‌ಇಪಿಯ ಕುರಿತಂತೆ ಸಮರ್ಪಕವಾದ ತರಬೇತಿಯ ಅವಶ್ಯಕತೆಯಿದೆ. ಅದನ್ನು ಎಲ್ಲರು ಪಡೆದಾಗ ಮಾತ್ರ ಇದರ ಅನುಷ್ಠಾನ ಸಾಧ್ಯವೆಂದು ಅವರು ಹೇಳಿದರು. ಇದನ್ನು ಜಾರಿಗೊಳಿಸಲು ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಸಂಸ್ಥೆಗಳ ಆಡಳಿತ ಮಂಡಳಿಯು, ಶಿಕ್ಷಕರ ಹಾಗೂ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿರುತ್ತದೆ. ಮಗುವಿಗೆ ಬಾಲ್ಯದಲ್ಲಿಯೇ ನೀಡುವ ಶಿಕ್ಷಣ ಅವನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬಹುದು ಎಂಬುವುದೆ ಶಿಕ್ಷಣ ನೀತಿಯ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಸಮಾಜಿಕ ಪ್ರಮುಖರಾದ ಜಯ ಪ್ರಕಾಶ, ಹರ್ಷ ಉಪಸ್ಥಿತರಿದ್ದರು.