Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಜಿಲ್ಲಾ ಶೈಕ್ಷಣಿಕ ಸಹಮಿಲನ

ಮಂಗಳೂರು ಜು. 16 : ವಿದ್ಯಾಭಾರತಿ ಕರ್ನಾಟಕ ಅಖಿಲ ಭಾರತೀಯ ಶಿಕ್ಷ ಸಂಸ್ಥಾನ ಸಂಬಂಧಿತ ವಿದ್ಯಾ ಭಾರತಿ ದಕ್ಷಿಣ ಕನ್ನಡ ಜಿಲ್ಲೆ – ಜಿಲ್ಲಾ ಶೈಕ್ಷಣಿಕ ಸಹಮಿಲನ ಶಕ್ತಿ ರೆಸಿಡೆನ್ಶಿಯಲ್ ಕಾಲೇಜು ಶಕ್ತಿನಗರದಲ್ಲಿ ಮಂಗಳೂರಿನಲ್ಲಿ ನೆರವೇರಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಪ್ರೊ. ಎಂ.ಬಿ ಪುರಾಣಿಕ್ ಅಧ್ಯಕ್ಷರು ತುಳುನಾಡು ಎಜ್ಯುಕೇಶನ್ ಟ್ರಸ್ಟ್ ಮಂಗಳೂರು ಆಗಮಿಸಿ ತಮ್ಮ 50 ವರ್ಷಗಳ ಶೈಕ್ಷನಿಕ ನೆನಪಿನ ದಾರಿಯಲ್ಲಿ ಉತ್ತಮ ಶಿಕ್ಷಕನಾಗಬೇಕಾದರೆ ಜ್ಞಾನ ಕಕ್ಷುಗಳನ್ನು ಕಂಡುಕೊಳ್ಳುವ ಸಂಸ್ಕೃತಿ, ಸಂಸ್ಕಾರಗಳ ನೆಲೆಗಳನ್ನು ತಿಳಿಸಿದರು. ಶಿಕ್ಷಕ ವರ್ಗ ಉತ್ಕೃಷ್ಟವಾಗಿ ಕಾರ್ಯವೆಸಗಿದರೆ ಬದಲಾವಣೆ, ಸ್ಥಿರತ್ವ ಸಾಧ್ಯ ಎಂದರು. ಪ್ರಾಸ್ತವಿಕ ಭಾಷಣದಲ್ಲಿ ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ್ ಜಿ. ಇವರು ಸಮಾನ ಶೈಕ್ಷಣಿಕ ದೃಷ್ಠಿ – ಸಹಮಿಲನ ಸಂಘಟನೆ, ಶಾರೀರಿಕ ಬದ್ಧತೆ, ಯೋಗ – ಸಂಸ್ಕೃತಿ – ಸಂಸ್ಕಾರಗಳ ಶಿಕ್ಷಣ ನಮ್ಮ ಶೈಕ್ಷಣಿಕ ಶಿಸ್ತು ಎಂದು ತಿಳಿಸುತ್ತಾ, ಕ್ರಿಯಾ ಶೋಧತೆ ಇರಬೇಕು. ಜ್ಞಾನದ ಹುಡುಕಾಟವಿರಬೇಕು ಎಂಬ ಮೌಲ್ಯ ನುಡಿಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾದ ಡಾ. ಕೆ.ಸಿ ನಾೖಕ್‌ ಆಡಳಿತಾಧಿಕಾರಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ಉಪಸ್ಥಿತರಿದ್ದರು.

ಶ್ರೀ ರಮೇಶ ಕೆ. ಜಿಲ್ಲಾ ಕಾರ್ಯದರ್ಶಿ ವಿದ್ಯಾ ಭಾರತಿ ಸಭೆಯ ಗಣ್ಯವಕ್ತಿಗಳನ್ನು ಸ್ವಾಗತಿಸಿದರು. 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪದವಿಪೂರ್ವ ಅಂತಿಮ ಪರೀಕ್ಷೆಯಲ್ಲಿ ಶಾಲಾ ಮಟ್ಟದಲ್ಲಿ ಅಗ್ರ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳನ್ನು ಶಕ್ತಿ ಕಾಲೇಜಿನ ಸಂಸ್ಥಾಪಕರು ಆಡಳಿತಾಧಿಕಾರಿಯವರು ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಿದ್ಯಾಭಾರತಿ ಜಿಲ್ಲಾಧ್ಯಕ್ಷರಾದ ಲೋಕಯ್ಯ ಡಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ತಾರಾ ಮಾತಾಜಿ, ಶ್ರೀ ರವಿರಾಜ್ ಕಲ್ಲಡ್ಕ, ಶ್ರೀ ವೆಂಕಟರಮಣ್ ಜಾ, ಶ್ರೀ ದಯಾನಂದ ಕಟೀಲು, ಶ್ರೀ ವಸಂತ ಮಾಧವ, ಶ್ರೀ ರಮೇಶ ಕೆ, ಶ್ರೀ ಕರುಣಾಕರ ಉಪಸ್ಥಿತರಿದ್ದರು. ಸರಸ್ವತಿ ವಂದನೆಯೊಂದಿಗೆ ಪ್ರಾರ್ಥನೆ ನೆರವೇರಿತು. ಕಾರ್ಯಕ್ರಮವನ್ನು ಕನ್ನಡ ಅಧ್ಯಾಪಕ ಶರಣಪ್ಪ ನೆರವೇರಿಸಿದರು.