Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ಪದವಿ ಪೂರ್ವ ಕಾಲೇಜಿನ ಕಬ್ಬಡಿ ತಂಡ ರಾಷ್ಟ್ರೀಯ ಮಟ್ಟದಲ್ಲಿ 3 ನೇ ಸ್ಥಾನದಲ್ಲಿ ಆಯ್ಕೆ

ಮಂಗಳೂರು ನಂ. 3 : ಶಕ್ತಿನಗರ ಶಕ್ತಿ ಪದವಿ ಪೂರ್ವ ಕಾಲೇಜಿನ 19 ರ ಒಳಗಡೆಯ ವಯೋಮಿತಿಯ ಬಾಲಕರ ಕಬ್ಬಡಿ ತಂಡವು ವಿದ್ಯಾಭಾರತಿಯ ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ರಾಜಸ್ಥಾನದ ಎದುರು ಗೆಲುವು ಸಾಧಿಸಿದೆ. ಶಕ್ತಿ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಕರಾದ ಆಕಾಶ್ ಶೆಟ್ಟಿ ತರಬೇತುದಾರರಾಗಿದ್ದು ಮಾರ್ಗದರ್ಶನ ಮಾಡಿರುತ್ತಾರೆ. ಉತ್ತಮ ಕಬ್ಬಡಿ ಆಟಗಾರರಾಗಿ ಅಶ್ವಿದ್, ಭರತ್, ಮೊಹಮ್ಮದ್ ಸುಹೈಲ್, ಜಾಬೀರ್, ಹಿತೇಶ್ ಮತ್ತು ಶಿವರಾಜ್ ಇವರನ್ನು ಗುರುತಿಸಲಾಗಿದೆ.

ಈ ಮೂಲಕ ಶಕ್ತಿ ಪಪೂ ಕಾಲೇಜು ಕಬ್ಬಡಿ ತಂಡ ರಾಷ್ಟ್ರೀಯ ಮಟ್ಟದಲ್ಲಿ 3 ನೇ ಸ್ಥಾನ ಪಡೆದಿರುತ್ತದೆ. ಇವರನ್ನು ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌, ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ, ಶಕ್ತಿ ಪಪೂ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಅಭಿನಂದಿಸಿರುತ್ತಾರೆ.