Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಭಾರತದ ಮೊದಲ ಹಂಗಾಮಿ ಸರ್ಕಾರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ರಚಿಸಿದರು – ಸಿ. ಎಸ್. ಪ್ರಕಾಶ

ಮಂಗಳೂರು, ಜು. 16 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ವಿದ್ಯಾ ಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಂಕುಲದ ಶೈಕ್ಷಣಿಕ ಸಹಮಿಲನದಲ್ಲಿ ’ಆಜಾದ್ ಹಿಂದ್ ಸರ್ಕಾರ’ ಎಂಬ ವಿಶೇಷ ಭಾಷಣವನ್ನು ಆಯೋಜಿಸಲಾಗಿತ್ತು. ಈ ವಿಶೇಷ ಭಾಷಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪ್ರಕಾಶ ಪಿ. ಎಸ್. ನಡೆಸಿಕೊಟ್ಟರು.

ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಭಾರತದ ಸ್ವಾತಂತ್ರ್ಯಕೋಸ್ಕರ ಪ್ರಬಲವಾದ ಹೋರಾಟ ಮಾಡಿದವರಲ್ಲಿ ನೇತಾಜಿ ಸುಭಾಷ್ ಚಂದ್ರಬೋಸರು ಪ್ರಮುಖ ಸ್ಥಾನವನ್ನು ಪಡೆಯುತ್ತಾರೆ. ಶಿಸ್ತು ಬದ್ಧ ಸೈನ್ಯವನ್ನು ಕಟ್ಟಿ ಅದರ ಮೂಲಕ ಜಗತ್ತಿನಲ್ಲಿ ಭಾರತವನ್ನು ಪರಿಚಯಿಸಿ ಬ್ರಿಟಿಷರನ್ನು ಭಾರತದಿಂದ ಹೊರ ಹಾಕುವುದು ಇವರ ಯೋಜನೆಯಾಗಿತ್ತು. ಇದಕ್ಕೋಸ್ಕರ ಲಕ್ಷಾಂತರ ಸೈನಿಕರಿಗೆ ತರಬೇತಿ ನೀಡಿ ಭಾರತದಲ್ಲಿ ಬ್ರಿಟಿಷ್‌ರ ವಿರುದ್ಧ ಹೋರಾಡಲು ತಂತ್ರಗಳನ್ನು ರೂಪಿಸಿದರು. ಬ್ರಿಟಿಷ್‌ರನ್ನು ಭಾರತದಿಂದ ಹೊರಹಾಕಲು ಭಾರತದ ಮೊದಲ ಹಂಗಾಮಿ ಸರ್ಕಾರವನ್ನು ರಚಿಸಿದರು. ಆದರೆ ದುರ್ದೈವದಿಂದ ವಿಮಾನ ಅಪಘಾತಕ್ಕೊಳಗಾಗುವುದರ ಮೂಲಕ ಅವರು ತನ್ನ ಪ್ರಾಣವನ್ನು ಅರ್ಪಿಸುತ್ತಾರೆ. ಇವರ ತಂತ್ರಗಾರಿಕೆಯು ಬ್ರಿಟಿಷ್‌ರಲ್ಲಿ ನಡುಕ ಉಂಟುಮಾಡುತ್ತದೆ. ನೇತಾಜಿಯವರ 125ನೇ ವರ್ಷದಲ್ಲಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ನಾವು ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ದೇಶಭಕ್ತಿಯನ್ನು ಮೈಗೂಡಿಸಬೇಕೆಂದು ಅವರು ಕರೆ ನೀಡಿದರು.

ಸಮರೋಪ ಸಮಾರಂಭ :
ಶೈಕ್ಷಣಿಕ ಸಹಮಿಲನದ ಸಮರೋಪ ಭಾಷಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ನಡೆಸಿಕೊಟ್ಟರು. ನಂತರ ಮಾತನಾಡಿದ ಅವರು ಶಿಕ್ಷಕರು ಯಾವಾಗಲು ಗುರುಗಳ ಸ್ಥಾನವನ್ನು ಪಡೆಯಬೇಕು. ವಿದ್ಯಾರ್ಥಿಗಳಿಗೆ ಹೆಚ್ಚಿನ ಒಳ್ಳೆಯ ವಿಷಯಗಳ ಮಾರ್ಗದರ್ಶನ ನೀಡಿ ಅವರನ್ನು ಸರಿದಾರಿಗೆ ತರಬೇಕು. ಇದಕೋಸ್ಕರ ನಾವು ಮಹರ್ಷಿ ಶಿಕ್ಷಣವನ್ನು ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಭೋದಿಸಬೇಕು. ಆಗ ವಿದ್ಯಾರ್ಥಿಯು ಸನಾತನ ಭಾರತದ ಶಿಕ್ಷಣದ ಮೂಲಕ ಒಳ್ಳೆಯ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಬದ್ಧತೆ ಹೊಂದಲು ಸಾಧ್ಯ ಎಂದು ಹೇಳಿದರು. ಪ್ರಾಚೀನ ಭಾರತವು ಎಲ್ಲಾ ಕ್ಷೇತ್ರದಲ್ಲಿಯು ಸಾಧನೆ ಮಾಡಿದೆ. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದು ಕೆರ ನೀಡಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ| ಕೆ.ಸಿ. ನಾೖಕ್‌ ಶುಭಕೋರಿದರು.

ಈ ಕಾರ್ಯಕ್ರಮದಲ್ಲಿ ಒಟ್ಟು 27 ಸಂಸ್ಥೆಯ 420 ಶಿಕ್ಷಕರು ಹಾಗೂ ಶಿಕ್ಷಕೇತರರು ಭಾಗವಹಿಸಿದರು. ವಿದ್ಯಾ ಭಾರತೀಯ ಜಿಲ್ಲಾ ಕಾರ್ಯದರ್ಶಿ ರಮೇಶ.ಕೆ ಸ್ವಾಗತಿಸಿ, ಜಿಲ್ಲಾ ಅಧ್ಯಕ್ಷರಾದ ಲೋಕಯ್ಯ.ಡಿ ವಂದಿಸಿ ಕನ್ನಡ ಅಧ್ಯಾಪಕ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.